ಕೇವೇಧೋ ಈ ವೀಲ್ಯೇಗಾಸ್, ಪ್ರಾಂಥೀಸ್ಕೋ ಗೋಮೇಥ್ ಡೇ

1580-1645. ಸ್ಪೇನಿನ ಪ್ರಖ್ಯಾತ ಕವಿ, ಮತ್ತು ವಿಡಂಬನಕಾರ. ಮ್ಯಾಡ್‍ರಿಡ್‍ನಲ್ಲಿ ಜನಿಸಿದ. ಅಲ್ಕಾಲ ಮತ್ತು ವಲ್ಲಡೊಲಿಡ್ ವಿಶ್ವ ವಿದ್ಯಾನಿಲಯಗಳಲ್ಲಿ 1596ರಿಂದ 1606ರ ವರೆಗೆ ಕಲೆ ಮತ್ತು ವೇದಾಂತ ವಿಷಯಗಳನ್ನು ತೆಗೆದುಕೊಂಡು ಅಭ್ಯಾಸ ನಡೆಸಿದ. 1613ರಲ್ಲಿ ಸಿಸಲಿಯ ರಾಜಪ್ರತಿನಿಧಿ ಓಸುನ ಡ್ಯೂಕನಿಗೆ ರಾಜಕೀಯ ವಿಷಯಗಳ ಸಲಹೆಗಾರನಾದ. ಸರ್ಕಾರದ ವಿರುದ್ಧ ಒಳಸಂಚಿನ ಪಡೆಯಲ್ಲಿ ಸೇರಿದ್ದನೆಂದು ಈತನನ್ನು ವೆನೀಷನ್ ಸರ್ಕಾರ ಆಪಾದಿಸಿದಾಗ ಭಿಕ್ಷುಕರ ವೇಷದಲ್ಲಿ ತಲೆತಪ್ಪಿಸಿಕೊಂಡನೆಂದು ಹೇಳಲಾಗಿದೆ. ಓಸುನ ಸ್ಥಾನದಿಂದ ಕೆಳಗಿಳಿದ ಮೇಲೆ ಒಂದು ವರ್ಷ(1620) ಸೆರೆಯಲ್ಲಿದ್ದು, ಮರುವರ್ಷ ಹೊರಬಂದ. 	

ಕೇವೇಧೋ ತನ್ನ ಕಾಲದ ಐರೋಪ್ಯ ಸಾಹಿತ್ಯದ ಪ್ರಖ್ಯಾತ ಲೇಖಕನೆನಿಸಿಕೊಂಡಿದ್ದ. ಪ್ರತಿಭಾವಂತನಾದ ಈತನ ವಿದ್ವತ್ತು ಸಂಸ್ಕøತಿ ನೀತಿಬೋಧಕ ಕೃತಿಗಳನ್ನು ನೀಡಲು ನೆರವಾಯಿತು. ಮೇಲುಕೀಳೆಂಬ ಭೇದವಿಲ್ಲದೆ ಬಾಳಿದನಾದುದರಿಂದ ಈತನ ಕೃತಿಗಳಲ್ಲಿ ಎಲ್ಲಮಟ್ಟದ ಜೀವನವನ್ನು ಕಾಣಬಹುದು. ಈತ ಏಕಾಂಗಿ, ನಿರಾಶಾವಾದಿ, ಕಠಿಣ ಹೃದಯಿ. ಸ್ಪೇನಿನ ಅವನತಿಯ ಬಗ್ಗೆ ಮೂಡಿದ ಚಿಂತನೆಗಳು ಇವನ ಹಲವಾರು ಕೃತಿಗಳಿಗೆ ಸ್ಫೂರ್ತಿನೀಡಿವೆ.

ಈತನ ಲಾ ವಿಡಾ ಡೆಲ್ ಬುಸ್‍ಕನ್ (ಐಚಿ viಜಚಿ ಜeಟ busಛಿoಟಿ-1603; ಮೋಸಗಾರನ ಜೀವನ) ಎಂಬ ಗದ್ಯ ಗ್ರಂಥ ಖಳನಾಯಕನೊಬ್ಬನ ಕಥೆಯಾಗಿದೆ. ನಾಯಕ ಪಾಬ್ಲೋಸ್ ಕೆಳವರ್ಗದ ಹುಡುಗ. ಈತ ದೊರೆಯ ಆಸ್ಥಾನವನ್ನು ಪ್ರವೇಶಿಸಿ ಶ್ರೀಮಂತ ಕನ್ಯೆಯನ್ನು ಮದುವೆಯಾಗುವ ಯತ್ನದಲ್ಲಿ ವಿಫಲನಾಗಿ, ಅನೇಕ ರೀತಿಯಲ್ಲಿ ಭಗ್ನಸಾಹಸನಾಗಿ, ಅಮೇರಿಕಕ್ಕೆ ತೆರಳುವುದೇ ಇದರ ಕಥಾವಸ್ತು. ಇದು ಅಜ್ಞಾನ ಕವಿಯೊಬ್ಬನ ಕಾದಂಬರಿ ಲಾಸಾರಿಲ್ಯೊ ಕಥೆಯ ಅನುಕರಣವಾದರೂ ಅದರಷ್ಟು ನೈಜಚಿತ್ರಣವಾಗಿರದೆ ವಿಕಟಹಾಸ್ಯ, ಮತ್ತು ವಿಡಂಬನಗಳಿಂದ ತುಂಬಿದೆ. ಈತನ ಸುಪ್ರಸಿದ್ಧ ಗದ್ಯಗ್ರಂಥ ಸ್ವೇನ್ಯೂಸ್   (sueಟಿos; ಸ್ವಪ್ನಚಿತ್ರಗಳು) ಕೃತಿಗೆ ಡಾಂಟೆ ಮತ್ತು ಲೂಷನರ ಕೃತಿಗಳೇ ಮಾದರಿ. ಇದರಲ್ಲಿ ಪ್ರಳಯೋತ್ತರದಲ್ಲಿ ದೇವರು ನ್ಯಾಯ ವಿಚಾರಣೆ ಮಾಡುವುದು, ನರಕದ ಶಿಕ್ಷೆಗಳು ಮುಂತಾದ ಚಿತ್ರಗಳು ಬರುತ್ತವೆ.  ಇಲ್ಲಿ ವಿವಿಧ ವೃತ್ತಿಯ ಜನರು ಲೇಖಕನ ದುರಾಗ್ರಹಕ್ಕೆ ಪಾತ್ರರಾಗಿ ಈತನ ಸೂತ್ರಾನುವರ್ತಿಗಳಂತೆ ಚಿತ್ರಿತರಾಗಿ ಉಗ್ರ ವಿಡಂಬನೆಗೆ ತುತ್ತಾಗುತ್ತಾರೆ. ಉದಾಹರಣೆಗೆ: ಚಾವಟಿಯಿಂದ ಹೊಡೆಯುವುದರಲ್ಲಿ ನಿನಗಿಂತ ನಾನೇ ಲೇಸು ಎಂದು ಗಾಡಿ ಹೊಡೆಯುವವನೊಬ್ಬ ಸೈತಾನನಿಗೆ ಸವಾಲು ಹಾಕುತ್ತಾನೆ. ಆವೇಷದಲ್ಲಿ ಬರೆದ ಈ ಪುಸ್ತಕದಲ್ಲಿ ಸಮಾಜದ ಲೋಪದೋಷಗಳು ವಿಸ್ತಾರವಾಗಿ, ಮರ್ಮಭೇದಕವಾಗಿ ಚಿತ್ರಿತವಾಗಿದ್ದರೂ ಪಾತ್ರಾಪಾತ್ರತೆಯ ವಿವೇಚನೆ ಕಡಿಮೆ. ಪ್ರಮೆಂಟಿಕಾಸ್ ಈ ಆರಾನ್ವಿಲೆಸ್ ಜನರಲ್ಸ್ (Pಡಿmeಟಿಣiಛಿಚಿs ಥಿ ಂಡಿಟಿಛಿeಟes ಉeಟಿeಡಿಚಿಟes) ಪುಸ್ತಕದಲ್ಲಿ ಜನಸಾಮಾನ್ಯರ ದುರಾಭ್ಯಾಸಗಳನ್ನು ಚಿತ್ರಿಸಲಾಗಿದೆ. ಉದಾ: ಕೆಲವರು ನಡೆಯುವಾಗ ಪಕ್ಕದ ಗೋಡೆಗಳನ್ನು ಮುಟ್ಟದಿರಲಾರರು; ಮತ್ತು ಕೆಲವರು ದೂರ ತಿಳಿದಿದ್ದರೂ ಎಷ್ಟು ಮೈಲಿ ಎಂದು ಪ್ರಶ್ನಿಸುವರು; ಇನ್ನು ಕೆಲವರು ಮೂಗನ್ನು ಒರೆಸಿಕೊಂಡಮೇಲೆ ಮುತ್ತುಗಳು ಉದುರಿರುವುವೋ ಎಂದು ಕೈಚೌಕವನ್ನು ಬಿಡಿಸಿ ನೋಡುವರು-ಹೀಗೆ.  

 (ಕೆ.ಆರ್.ಜಿ.; ಎಂ.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ